Skip to content
FilmySphere

From the earlier FilmySphere, kept as published on 2014-10-27. It has not been updated.

Roopa nataraj 7 film muhurtha

ರೂಪಾ ನಟರಾಜ್ ರ 7 ಚಿತ್ರದ ಮುಹೂರ್ತ

Kannada

ರೂಪಾ ನಟರಾಜ್ ರ 7 ಚಿತ್ರದ ಮುಹೂರ್ತ

ನಿರ್ದೇಶಕ ಚಂದ್ರಶೇಖರ್ ಶ್ರೀವತ್ಸ ನೆನಪಿರಬಹುದು. ಪಟ್ರೆ ಲವ್ಸ್ ಪದ್ಮ ಮತ್ತು ಕಾಲಾಯ ತಸ್ಮೈ ನಮಃ ಚಿತ್ರಗಳ ಮೂಲಕ ಸುದ್ದಿಯಾದವರು. ಅವರು ಇದೀಗ ಹೊಸದೊಂದು ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಅಂದಹಾಗೆ ನಿರ್ದೇಶನದ ಜೊತೆಗೆ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿರುವ ಚಂದ್ರಶೇಖರ್ ರ ಚಿತ್ರದ ಹೆಸರು 7. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತದ ವೇಳೆ ಸುರಿದ ಭಾರೀ ಮಳೆಯಿಂದಾಗಿ ಪತ್ರಿಕಾಗೋಷ್ಠಿ ಕತ್ತಲೆಯಲ್ಲೇ ನಡೆದಿದ್ದು ವಿಶೇಷ.

ಏಳು ಎಂಬುದಕ್ಕೆ ಹಲವಾರು ವಿಶೇಷತೆಗಳಿವೆ. ಅದರಲ್ಲಿ ಒಳ್ಳೆಯದನ್ನು ಹೇಳುವುದರ ಜೊತೆಗೆ ಕೆಟ್ಟದ್ದನ್ನೂ ಹೇಳುತ್ತಾರೆ. ನಾವು ಒಳ್ಳೆಯದನ್ನು ಹೇಳಲಿದ್ದೇವೆ ಎಂದರು ಚಂದ್ರಶೇಖರ್. ಚಂದ್ರಶೇಖರ್ ನಾಯಕನಾದಾಗ ಆಕೆಗೆ ಜೋಡಿಯಾಗಿರುವವರು ಖ್ಯಾತ ಯುವನಟಿ ರೂಪಾ ನಟರಾಜ್. ಯಂಗ್ ಅ್ಯಂಡ್ ಎನರ್ಜೆಟಿಕ್ ಹುಡುಗಿಯೊಬ್ಬಳು ಮನಸ್ಸು ಮಾಡಿದರೆ ಒಬ್ಬನನ್ನು ಯಾವ ಮಟ್ಟಕ್ಕೆ ಮೋಸ ಮಾಡಬಹುದು ಎಂಬುದನ್ನು ತೋರಿಸುವುದೇ ತಮ್ಮ ಪಾತ್ರದ ವಿಶೇಷತೆ ಎಂದರು ರೂಪಾ. ಅಂದಹಾಗೆ ಚಿತ್ರಕ್ಕೆ ನಾಯಕಿಯಾದರೂ ಕತೆಯಲ್ಲಿ ತಮ್ಮದು ಖಳನಾಯಕಿಯ ಪಾತ್ರ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಬಳಿಕ ಮಾತನಾಡಿದ ಸಂಗೀತ ನಿರ್ದೇಶಕ ನೀಲ್ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಜಾನಪದಕ್ಕೆ ಫ್ಯೂಷನ್ ಮಿಕ್ಸ್ ಮಾಡಿ ಮತ್ತೊಂದು ರೀತಿಯ ಸಂಗೀತ ವೈವಿಧ್ಯವನ್ನು ತೋರಿಸಲು ಯತ್ನಿಸಿದ್ದೇವೆ. ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ, ಚೇತನ್, ಫಯಾಜ್ ಖಾನ್ ಮೊದಲಾದವರ ತಂಡವಿದೆ ಎಂದರು. ಚಿತ್ರವನ್ನು ಬೆಂಗಳೂರು, ಊಟಿ, ಮೈಸೂರು, ಕೆಜಿಎಫ್ ಮೊದಲಾದೆಡೆಗಳಲ್ಲಿ ಚಿತ್ರೀಕರಿಸಲಾಗುವುದಂತೆ. ನಿರ್ಮಾಪಕ ಲಕ್ಷ್ಮೀಶ ತಾವು ಇದು ನಿರ್ಮಾಣರಂಗದಲ್ಲಿ ಪ್ರಥಮ ಪ್ರಯತ್ನ ಮಾಡುತ್ತಿರುವುದಾದರೂ ಚಿತ್ರರಂಗದಲ್ಲೊಂದು ಒಳ್ಳೆಯ ಚಿತ್ರ ನೀಡುವ ಉದ್ದೇಶ, ಭರವಸೆ ಇರುವುದಾಗಿ ಹೇಳಿದರು. ಚಿತ್ರದ ಛಾಯಾಗ್ರಾಹಕ ಶಂಕರ್ ಪತ್ರಿಕಗೋಷ್ಠಿಯಲ್ಲಿದ್ದರು. ಅಂದಹಾಗೆ ಚಿತ್ರವನ್ನು ಮುಂದಿನ ವರ್ಷ ಫೆಬ್ರವರಿ 13ಕ್ಕೆ ಬಿಡುಗಡೆಗೊಳಿಸಲು ನಿರ್ದೇಶಕರು ಯೋಜನೆ ಹಾಕಿದ್ದಾರೆ.