From the earlier FilmySphere, kept as published on 2014-10-27. It has not been updated.
gulihatti trailer launched
ಗೂಳಿ ಹಟ್ಟಿ ಚಿತ್ರದ ಬಗೆಗಿನ ಕೈಪಿಡಿ ಬಿಡುಗಡೆ
Kannada
ಗೂಳಿ ಹಟ್ಟಿ ಚಿತ್ರದ ಬಗೆಗಿನ ಕೈಪಿಡಿ ಬಿಡುಗಡೆ
ನವ ನಿರ್ದೇಶಕ ಶಶಾಂಕ್ ರಾಜ್ ನಿರ್ದೇಶಿಸುತ್ತಿರುವ ಗೂಳಿಹಟ್ಟಿ ಚಿತ್ರದ ವಿಶೇಷತೆಗಳ ಬಗ್ಗೆ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಲಾಗಿದೆ. ರೇಣುಕಾಂಬ ಸ್ಟುಡಿಯೋನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯನ್ನೂ ಮಾಡಲಾಯಿತು.
ನಿರ್ದೇಶಕ ಶಶಾಂಕ್ ರಾಜ್ ಈಶ್ವರಿ ನಿರ್ಮಾಣ ಸಂಸ್ಥೆಯೊಂದಿಗೆ ಕಳೆದ 12 ವರ್ಷಗಳಿಂದ ಗುರುತಿಸಿಕೊಂಡಿದ್ದವರು. ಇದೀಗ ಪ್ರಥಮ ಬಾರಿ ಚಿತ್ರವೊಂದನ್ನು ನಿರ್ದೇಶಿಸಲು ಮುಂದೆ ಬಂದಿದ್ದಾರೆ. ಇದರಲ್ಲಿ ಋಷಿ ಕುಮಾರ ಸ್ವಾಮೀಜಿ ನಟಿಸಿರುವ ಹಾಡು ಚಿತ್ರದ ಹೈಲೈಟ್ ಅಂಶಗಳಲ್ಲೊಂದು ಎಂಬುದು ಅವರು ಸಮಾರಂಭದಲ್ಲಿ ಹಂಚಿಕೊಂಡ ಪ್ರಮುಖ ವಿಚಾರ. ಸಂಗೀತ ನಿರ್ದೇಶಕ ಶ್ರೀಮಂಜು ಮಾತನಾಡುತ್ತಾ ಚಿತ್ರಕ್ಕಾಗಿ ತಾವು ಸಂಗೀತ ನೀಡಿದ ದುಃಖ ಗೀತೆಯೊಂದನ್ನು ಹಾಡಲು ಬಂದ ವಿಜಯಪ್ರಕಾಶ್ ಇದನ್ನು ಡಾ.ರಾಜಕುಮಾರ್ ಹಾಡಿದ್ದರೆ ತುಂಬ ಚೆನ್ನಾಗಿರುತ್ತಿತ್ತು ಎಂದಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡರು. ಋಷಿಕುಮಾರ ಸ್ವಾಮೀಜಿ ತನಗೆ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ ಪರಕಾಯ ಪ್ರವೇಶ ಮಾಡುವಂಥ ಅನುಭವವಾಯಿತೆಂದರು!ನಾಯಕರಾದ ಪವನ್ ಸೂರ್ಯಗೆ ಇದು ಪ್ರಥಮಚಿತ್ರ. ಅವರ ಜೊತೆ ಸಮಾನ ಪಾತ್ರಗಳಲ್ಲಿ ನಟಿಸುತ್ತಿರುವರು ಅಪ್ಪು ವೆಂಕಟೇಶ್, ರಾಘವ್ ನಾಗರಾಜ್ , ಅರುಣ್ ಭಗತ್ ಮತ್ತು ಇಂಡಿಯನ್ ಖ್ಯಾತಿಯ ಮಹೇಶ್. ನಾಯಕಿ ತೇಜಸ್ವಿನಿ ಮಾತನಾಡಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇನ್ನು ಎಲ್ಲವೂ ವೀಕ್ಷಕರ ಕೈಯ್ಯಲ್ಲಿದೆ ಎಂದರು. ನಟ ಮೈಕೋ ನಾಗರಾಜ್, ಗಾಯಕ ಅವಿನಾಶ್ ಚಬ್ಭಿ, ರವೀಂದ್ರ ಸೂರ್ಗಾವಿ, ನಿರ್ನಾಪಕ ಕಿರಣ್ ಭಾರ್ಗವ್ ಉಪಸ್ಥಿತರಿದ್ದು ಮಾತನಾಡಿದರು. ಚಿತ್ರದಲ್ಲಿ ರಂಗಾಯಣ ರಘು, ದೊಡ್ಡಣ್ಣ, ಅವಿನಾಶ್, ಹೊನ್ನವಳ್ಳಿ ಕೃಷ್ಣ, ಶರತ್ ಲೋಹಿತಾಶ್ವ, ಆದಿ ಲೋಕೇಶ್, ಸ್ವಯಂವರ ಚಂದ್ರು, ಶರತ್ ಚಂದ್ರ, ಸುಧಾ ಬೆಳವಾಡಿ, ಎಂಎನ್ ಲಕ್ಷ್ಮೀದೇವಿ ಮೊದಲಾದ ಹಿರಿಯ ಕಲಾವಿದರ ತಂಡವೇ ಇರುವುದು ವಿಶೇಷ. ಉತ್ತರಕರ್ನಾಟಕದ ಮೈಲಾರ ಲಿಂಗೇಶ್ವರ ಸ್ವಾಮಿ ದೇವಾಲಯದ ಪರಿಸರದಲ್ಲಿ ಜಾತ್ರೆಗೆಂದು ನೆರೆದ 20ಲಕ್ಷಕ್ಕೂ ಅಧಿಕ ಮಂದಿಯನ್ನು ಹೆಲಿಕ್ಯಾಮ್ ಮೂಲಕ ಚಿತ್ರೀಕರಿಸಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆಯಲಾಗಿದ್ದು ಹಲವಾರು ಕಾರಣಗಳಿಂದಾಗಿ ಚಿತ್ರ ನಿರೀಕ್ಷೆ ಮೂಡಿಸಿರುವುದಂತೂ ವಾಸ್ತವ. ಗೂಳಿಹಟ್ಟಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ಮಮತಾ ರಾವತ್ ಮತ್ತು ನಟ ಅರುಣ್ ಕಾರ್ಯಕ್ರಮ ನಿರೂಪಿಸಿದರು.