Skip to content
FilmySphere

From the earlier FilmySphere, kept as published on 2014-10-21. It has not been updated.

Jaggi to release on November 1st

ರಾಜ್ಯೋತ್ಸವಕ್ಕೆ "ಜಗ್ಗಿ" ಬರಲಿದ್ದಾನೆ!

Kannada

ನವನಟ ಸುನೀಲ್ ರಾಜ್ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಜಗ್ಗಿ ಚಿತ್ರ ಇದೇ ತಿಂಗಳ ಕೊನೆಗೆ ತೆರೆಕಾಣಲಿದೆ. ಆ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ವಿಎಂ ರಾಜ್ 'ರಾಜ್ಯೋತ್ಸವದ ಸಂಭ್ರಮದಲ್ಲಿ ತೆರೆಕಾಣಲು ಈ ಸ್ವಮೇಕ್ ಚಿತ್ರಕ್ಕೆ ತುಂಬಾನೇ ಅರ್ಹತೆಯಿದೆ' ಎಂದರು.

ಚಿತ್ರದಲ್ಲಿ ನಾನು ಕಾಲೇಜ್ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದು, ಇದೊಂದು ಫ್ಯಾಮಿಲಿ ಸ್ಟೋರಿಯಾಗಿದೆ ಎಂದರು ನಾಯಕ ಸುನೀಲ್ ರಾಜ್. ನನ್ನಂಥ ಕಲಾವಿದರಿಗೆ ಈ ಚಿತ್ರಕ್ಕೆ ಸಿಕ್ಕಂಥ ನಿರ್ಮಾಪಕರು ದೊರಕಿದರೆ ಅದುವೇ ಅದೃಷ್ಟವೆಂದ ಸುನೀಲ್ ಚಿತ್ರಕ್ಕಾಗಿ ತುಂಬಾ ಡೆಡಿಕೇಟ್ ಆಗಿ ಕೆಲಸ ಮಾಡಿದ್ದಾರೆಂದು ತಂಡದ ಅಭಿಪ್ರಾಯ. ಉದಾಹರಣೆಗೆ ಚಿತ್ರದಲ್ಲಿ ಬೈಕ್ ಮೂಲಕ ಗ್ಲಾಸ್ ಒಡೆಯುವುದೂ ಸೇರಿದಂತೆ ಪ್ರಮುಖ ಸಾಹಸ ಸನ್ನಿವೇಶಗಳನ್ನು ಖುದ್ದು ನಾಯಕನೇ ನಿರ್ವಹಿಸಿದ್ದಾರಂತೆ. ನಾಯಕಿ ಮುಂಬೈ ಬೆಡಗಿ ಅಹ್ನಾ ತಮ್ಮದು ಬಬ್ಲಿ ಬಬ್ಲಿ ಪಾತ್ರವೆಂದರು. ನಟ ಕುರಿರಂಗ ತಮಗೆ ಚಿತ್ರದಲ್ಲಿ ಹೇಳಿಕೊಳ್ಳುವಂಥ ಒಳ್ಳೆಯ ಪಾತ್ರ ದೊರಕಿದ್ದು, ನಿರ್ದೇಶಕರು ಬರೆದಿರುವ ಆಕರ್ಷಕ ಸಂಭಾಷಣೆ ತಮ್ಮ ಪಾತ್ರದ ಹೈಲೈಟ್ ಎಂದರು. ಹಂಚಿಕೆದಾರ ಆರ್ಯಮೌರ್ಯ ತಿಮ್ಮೇಗೌಡ ಮಾತನಾಡಿ ಚಿತ್ರವನ್ನು ನವೆಂಬರ್ ಆರಂಭದಲ್ಲಿ ಥಿಯೇಟರ್ ಗೆ ತರುವುದರಿಂದ ಪರಭಾಷೆ ಚಿತ್ರಗಳ ಹಾವಳಿ ಇರುವುದಿಲ್ಲ. ಹಾಗಾಗಿ 75 ಚಿತ್ರಮಂದಿರಗಳಿಗೆ ಜಗ್ಗಿ ನುಗ್ಗಲಿದ್ದಾನೆ ಎಂದರು. ಅಧ್ಯಕ್ಷದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿದ್ದ ಆರೋಹಿತ, ಸಂಗೀತ ನಿರ್ದೇಶಕ ವಿಲ್ಸನ್ ಜೋಶ್ವಾ, ಛಾಯಾಗ್ರಾಹಕ ರಮೇಶ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.