Skip to content
FilmySphere

From the earlier FilmySphere, kept as published on 2014-10-19. It has not been updated.

Namaste Madam Releasing this week

ನಮಸ್ತೇ ಮೇಡಂ ಬಿಡುಗಡೆಗೆ ಸಿದ್ಧ

Kannada

ನಮಸ್ತೇ ಹೊಡೆಯಲು ಮೇಡಮ್ ಸಿದ್ಧವಾಗಿದ್ದಾರೆ. ಚಿತ್ರದ ಬಗ್ಗೆ ಮೈಸೂರು, ಹಾಸನ, ಶಿವಮೊಗ್ಗ, ತುಮಕೂರುಗಳಲ್ಲಿ ಪ್ರಚಾರ ಕೈಗೊಂಡಿದ್ದು ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬ ಖುಷಿ ಹಂಚಿಕೊಂಡರು ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಶಿವರಾಜ್. ಅವರು ನಮಸ್ತೇ ಮೇಡಂ ಚಿತ್ರ ಇದೇ ವಾರ ಬಿಡುಗಡೆಗೊಳ್ಳಲಿರುವ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಖ್ಯಾತ ಕಿರುತೆರೆ ನಿರ್ದೇಶಕ ಹಾಗೂ ನಮಸ್ತೇ ಮೇಡಂ ಚಿತ್ರದ ನಿರ್ಮಾಪಕ ರವಿ ಗರಣಿ ಮಾತನಾಡುತ್ತಾ 'ಚಿತ್ರವನ್ನು ನೂರು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿರುವುದಾಗಿ ಹೇಳಿದರು. ಚಿತ್ರದ ಪ್ರಚಾರ ಕಾರ್ಯದಲ್ಲಿ ಸಿಕ್ಕ ಪ್ರೋತ್ಸಾಹವನ್ನು ಅವರು ಕೂಡ ನೆನಪಿಸಿಕೊಂಡು ಖುಷಿ ಪಟ್ಟರು. ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ 'ನಮಸ್ತೇ ಮೇಡಂ ಎಂಬುದು ತೆಲುಗು ಮಿಸ್ಸಮ್ಮ ಚಿತ್ರದ ರಿಮೇಕ್. ಅದು ಅಲ್ಲಿ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ತಾನು ಮಧ್ಯಮ ವರ್ಗದ ಕುಟುಂಬದವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ಇಲ್ಲಿಯೂ ಅದೇ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆ ಇರುವುದಾಗಿ ಕಿಟ್ಟಿ ತಿಳಿಸಿದರು. ಕನ್ನಡದಲ್ಲಿ ನವ ನಿರ್ದೇಶಕನಾಗಿ ಪರಿಚಯಗೊಳ್ಳುತ್ತಿರುವ ರಘುರಾಜ್ ಮಾತನಾಡಿ ಪ್ರೇಕ್ಷಕರು ಚಿತ್ರನೋಡಿ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಮಾಧ್ಯಮದ ಮೂಲಕ ವಿನಂತಿಸಿದರು.