From the earlier FilmySphere, kept as published on 2014-10-19. It has not been updated.
First Rank Raju Muhoortha
ಫಸ್ಟ್ ರ್ಯಾಂಕ್ ರಾಜು ಗೆ ಮುಹೂರ್ತ
Kannada
ನಿರ್ದೇಶಕ ನರೇಶ್ ತಾವೇ ಕತೆ ಬರೆದು ನಿರ್ದೇಶಿಸುತ್ತಿರುವ ಚಿತ್ರ ಫಸ್ಟ್ ರ್ಯಾಂಕ್ ರಾಜು. ಚಿತ್ರಕ್ಕೆ ಕ್ಲ್ಯಾಪ್ ಹೊಡೆಯಲು ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದು ಶುಭ ಹಾರೈಸಿದವರು ಮುತ್ತಪ್ಪ ರೈ. ಕ್ಯಾಮರ ಸ್ವಿಚ್ ಆನ್ ಮಾಡಲು ರಾಘವೇಂದ್ರ ರಾಜಕುಮಾರ್ ಸಪತ್ನೀಕರಾಗಿ ಆಗಮಿಸಿದ್ದರು.
ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸುವ ನಾಯಕ ಸಾಮಾನ್ಯ ಜ್ಞಾನದ ವಿಚಾರಕ್ಕೆ ಬಂದಾಗ ಸೊನ್ನೆಯಾಗಿರುತ್ತಾನೆ. ಆದರೆ ಬದುಕಿನಲ್ಲಿಯೂ ನೂರರ ಸಾಧನೆ ಮಾಡುವತ್ತ ಹೇಗೆ ಹೋಗುತ್ತಾನೆ ಎಂಬುದನ್ನು ಹಾಸ್ಯಭರಿತವಾಗಿ ಹೇಳುವ ಚಿತ್ರವೇ ಫಸ್ಟ್ ರ್ಯಾಂಕ್ ರಾಜು ಎಂದು ಹೇಳುತ್ತಾರೆ ನಿರ್ದೇಶಕ ನರೇಶ್. ಅಂದಹಾಗೆ ತಮ್ಮ ಈ ಚಿತ್ರಕ್ಕೆ ಬಾಲಿವುಡ್ ನ ಯಶಸ್ವಿ ಚಿತ್ರವಾದ ತ್ರೀ ಇಡಿಯಟ್ಸ್ ನಿಂದ ಸ್ಪೂರ್ತಿಗೊಂಡಿದ್ದಾಗಿ ಅವರೇ ಹೇಳುತ್ತಾರೆ. ರಮೇಶ್ ಅರವಿಂದ್ ಗೆ ಅಸೋಸಿಯೇಟಾಗಿ ಕೆಲಸ ಮಾಡಿದ ಅನುಭವವಿರುವುದಾಗಿ ಅವರು ತಿಳಿಸಿದರು. ಚಿತ್ರವನ್ನು ಆನೆಕಲ್ಲು ಸೇರಿದಂತೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗುವುದಂತೆ. ಡೆಂಟಲ್ ಸ್ಟೂಡೆಂಟ್ ಅಪೂರ್ವ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರಿಗಿದು ಪ್ರಥಮ ಚಿತ್ರ. ಮತ್ತೋರ್ವ ನಾಯಕಿಯಾಗಿ ಬೆಡಗಿ ಕಾನಿಷ್ಕ ಕಾಣಿಸಿಕೊಳ್ಳುತ್ತಿದ್ದು ಪ್ರವೀಣ್ ಪ್ರಥಮ ಬಾರಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರದ ಮತ್ತೋರ್ವ ನಾಯಕಿಯಾಗಿ ಕಾನಿಷ್ಕಾ ನಟಿಸಿದ್ದು ಚಿತ್ರದಲ್ಲಿ 6 ಹಾಡುಗಳಿವೆಯೆನ್ನಲಾಗಿದೆ. ಸಂಗೀತ ನಿರ್ದೇಶಕ ಕಿರಣ್ ಗೆ ಇದು ಮೂರನೇ ಚಿತ್ರವಂತೆ. ನಿರ್ಮಾಪಕ ಮಂಜುನಾಥ್ ಒಳ್ಳೆಯ ಚಿತ್ರವೊಂದನ್ನು ನಿರ್ಮಿಸುವ ಖುಷಿಯಲ್ಲಿದ್ದರು.