Skip to content
FilmySphere

From the earlier FilmySphere, kept as published on 2014-10-18. It has not been updated.

adhyaksha 75 days celebration

ಅಧ್ಯಕ್ಷ ಚಿತ್ರಕ್ಕೆ 75ರ ಸಂಭ್ರಮ

Kannada

ಅಧ್ಯಕ್ಷ ಚಿತ್ರಕ್ಕೆ ಇದೀಗ 75ರ ಸಂಭ್ರಮ. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಮತ್ತು ನೆನಪಿರಲಿ ಪ್ರೇಮ್, ಶ್ರೀನಗರ ಕಿಟ್ಟಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

'ನಿರ್ದೇಶಕ ನಂದ ಕಿಶೋರ್ ನನಗೆ ನಲ್ಲ ಚಿತ್ರದ ವೇಳೆಯಿಂದಲೇ ಪರಿಚಯ. ಆತನಲ್ಲಿ ಒಬ್ಬ ಕಲಾವಿದನಿಗಿಂತಲೂ ಹೆಚ್ಚಿನದೇನೋ ಇರುವಂತೆ ನನಗೆ ಆಗಲೇ ಅನಿಸಿತ್ತು. ಆಗಲೇ ಹೊಸತನದ ಪ್ರಯತ್ನಕ್ಕೆ ತೊಡಗಿಕೊಳ್ಳುವಂತೆ ನಾನು ಆತನಲ್ಲಿ ಹೇಳಿದ್ದೆ. ಇಂದು ಒಬ್ಬ ಹಾಸ್ಯ ಕಲಾವಿದನನ್ನು ಇಟ್ಟುಕೊಂಡು ಸೂಪರ್ ಹಿಟ್ ಚಿತ್ರವನ್ನು ನೀಡುವ ಮೂಲಕ ನನ್ನ ನಂಬಿಕೆಯನ್ನು ನಿಜಗೊಳಿಸಿದ್ದಾರೆ' ಎಂದು ಸುದೀಪ್ ತೃಪ್ತಿಯ ಮಾತುಗಳನ್ನಾಡಿದಾಗ ನಂದಕಿಶೋರ್ ಬಂದು ಸುದೀಪ್ ಪಾದಗಳಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸುದೀಪ್ ರನ್ನು ನಾಯಕನನ್ನಾಗಿಸಿ ನಂದಕಿಶೋರ್ ನಿರ್ದೇಶಿಸುತ್ತಿರುವ 'ರನ್ನ' ಚಿತ್ರದ ಒಂದು ನಿಮಿಷದ ಪ್ರೊಮೊವನ್ನು ಬಿಡುಗಡೆಗೊಳಿಸಲಾಯಿತು. ಅಧ್ಯಕ್ಷ ಚಿತ್ರದ ನಾಯಕ ಶರಣ್ ಯಶಸ್ಸಿನ ಖುಷಿಯಲ್ಲಿ ಮಾತೇ ಹೊರಡುತ್ತಿಲ್ಲವೆಂದು ಕಡಿಮೆ ಮಾತನಾಡಿದರು. ಡ್ಯಾನ್ಸ್ ಎಂದರೆ ನಡುಕ ಎಂದು ಹೇಳುತ್ತಲೇ ಒಂದೆರಡು ಹಾಡುಗಳಿಗೆ ಮೈ ಕುಣಿಸಿದರು. ಅರ್ಜುನ್ ಜನ್ಯರಿಗೆ ಹರಿಕೃಷ್ಣರ ಡಿ'ಬೀಟ್ಸ್ ವತಿಯಿಂದ ಸುದೀಪ್ ಸನ್ಮಾನಗೈದರು. ನೆನಪಿರಲಿ ಪ್ರೇಮ್ ಈ ಯಶಸ್ಸನ್ನು ಬರಗಾಲದ ಬೆಳೆಯಂತೆ ಎಂದು ಖುಷಿ ಪಟ್ಟರು. ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಕಾಮಿಡಿ ಸ್ಕಿಟ್ ಮೂಲಕ ರಂಜಿಸಿದರು. ಅನುಪಮಾ ಕಾರ್ಯಕ್ರಮ ನಿರೂಪಿಸಿದರು. ಅರ್ಜುನ್ ಜನ್ಯಾ ಸಂಗೀತದಲ್ಲಿ ಅನುರಾಧ ಭಟ್ ಮೊದಲಾದವರರ ಗಾಯನವಿತ್ತು. ನಟ ರವಿಶಂಕರ್, ಶೈಲಜಾ ನಾಗ್, ಅಸ್ಮಿತಾ ಸೂದ್, ಹೇಬ ಪಟೇಲ್, ಪ್ರಾದೇಶಿಕ ಸೆನ್ಸಾರ್ ಬೋರ್ಡ್ ನಾಗೇಂದ್ರ ಸ್ವಾಮಿ, ನಿರ್ಮಾಪಕ ರಾಮು, ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಚಿತ್ರದ ಕಲಾವಿದ ಮತ್ತು ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.