Skip to content
FilmySphere

From the earlier FilmySphere, kept as published on 2014-10-17. It has not been updated.

Goa Audio and Trailer Launch

ಗೋವಾ ಚಿತ್ರಕ್ಕೀಗ ಟ್ರೇಲರ್ ಹಾಡುಗಳ ಹವಾ

Kannada

ಗೋವಾ ಚಿತ್ರದ ಸೀಡಿ ಬಿಡುಗಡೆಯಾಗಿದೆ. ಖ್ಯಾತ ನಿರ್ಮಾಪಕ ಸ್ವಸ್ತಿಕ್ ಶಂಕರ್ ಸೀಡಿ ಬಿಡುಗಡೆಗೊಳಿಸಿದ್ದಾರೆ. ಗಾಜಿನ ತೊಟ್ಟಿಯಲ್ಲಿ ಗೋವಾ ತೀರದ ಪ್ರತಿಕೃತಿ ನಿರ್ಮಿಸಿ ಅದರೊಳಗಿನಿಂದ ಸೀಡಿ ಬಿಡುಗಡೆಗೊಳಿಸಿದ್ದು ಸಮಾರಂಭದ ವಿಶೇಷತೆಯಾಗಿತ್ತು.

ಸಮಾರಂಭದಲ್ಲಿ ಮೂರು ಹಾಡುಗಳನ್ನು ಮತ್ತು ಟ್ರೇಲರ್ ಗಳನ್ನು ಕೂಡ ಬಿಡುಗೊಳಿಸಲಾಯಿತು. ನಿರ್ದೇಶಕ ಸೂರ್ಯ ಮಾತನಾಡಿ 'ಚಿತ್ರ ನಿರೀಕ್ಷೆಗಿಂತ ತಡವಾಗಿದೆ. ಹಾಗಂತ ಹಾಡುಗಳು ಹಳೆಯದಾಯಿತೆಂದು ಖಂಡಿತಾ ತಿಳಿಯಬೇಡಿ. ಯಾಕೆಂದರೆ, ಕಳೆದ ವರ್ಷವೇ ಇಂದಿಗೂ ಹೊಸ ಟ್ರೆಂಡ್ ಸೃಷ್ಠಿಸುವ ರೀತಿಯಲ್ಲಿನ ಹಾಡುಗಳನ್ನು ಅರ್ಜುನ್ ಜನ್ಯಾ ನೀಡಿದ್ದಾರೆ' ಎಂದು ಹಾಡುಗಳ ಬಗ್ಗೆ ಭರವಸೆಯ ಮಾತುಗಳನ್ನಾಡಿದರು. ಗೋವಾದಲ್ಲಿ ಚಿತ್ರೀಕರಣ ನಡೆಸುವಾಗ ಕಲಾವಿದರು ನೀಡಿದ ಸಹಕಾರ ಅಪಾರ ಎಂದು ಎಲ್ಲರಿಗೂ ಧನ್ಯವಾದ ಹೇಳಲು ಸೂರ್ಯ ಮರೆಯಲಿಲ್ಲ. ಕಾರ್ಯಕ್ರಮದ ನಾಯಕ ಅರ್ಜುನ್ ಜನ್ಯ ಮಾತನಾಡಿ 'ಚಿತ್ರದ ಎಲ್ಲ ಹಾಡುಗಳನ್ನು ಕನ್ನಡದ ಗಾಯಕರೇ ಹಾಡಿದ್ದಾರೆ ಎಂಬುದು ಈ ಸೀಡಿಯ ವಿಶೇಷ' ಎಂದರು. ಚಿತ್ರದ ನಾಯಕರಲ್ಲೊಬ್ಬರಾದ ಶ್ರೀಕಾಂತ್ ಗೆ 'ಶುರುವಾಯ್ತು..' ಎಂದು ಆರಂಭವಾಗುವ ಹಾಡು ಫೇವರಿಟ್ ಅಂತೆ. ಗೋವಾಗೆ ಹೋಗಿ ಚಿತ್ರೀಕರಣ ಮಾಡಿ ಬಂದಿದ್ದು ಒಂದು ಸುಂದರವಾದ ಟ್ರಿಪ್ ಹೋಗಿ ಬಂದ ಫೀಲ್ ನೀಡಿದೆ ಎಂದರು ಶ್ರೀಕಿ. ಅಂದಹಾಗೆ ನಾಯಕಿಯರಲ್ಲೊಬ್ಬರಾದ ಶರ್ಮಿಳಾ ಮಾಂಡ್ರೆ ಕೂಡ 'ಶುರುವಾಯ್ತು' ಎಂಬ ಅದೇ ಹಾಡು ತಮಗೂ ಫೇವರಿಟ್ ಎಂದು ಹೇಳುವ ಮೂಲಕ ಆ ಹಾಡಿನ ಬಗ್ಗೆ ಇಲ್ಲದ ಕುತೂಹಲ ಮೂಡಿಸಿದ್ದಾರೆ. ನಾಯಕಿಯರಾದ ರಚೆಲ್, ಸೋನು ಗೌಡ ಕೂಡ ಸಮಾರಂಭದಲ್ಲಿ ಪಾಲ್ಗೊಂಡು ವೇದಿಕೆಗೆ ಕಳೆ ನೀಡಿದರು. ಚಿತ್ರದಲ್ಲಿ ಡ್ಯಾನಿ ಮತ್ತು ಖಳನಟ ಧರ್ಮ ಜೋಡಿಯಾಗಿ ಕಾಣಿಸುತ್ತಿರುವುದು ವಿಶೇಷ. ಅಂದರೆ ಧರ್ಮ ಗೇ ಪಾತ್ರ ಮಾಡುತ್ತಿದ್ದಾರಂತೆ. ನಟ ಕರಿಸುಬ್ಬು ಸೇರಿದಂತೆ ನಿರ್ಮಾಪಕ ಶಂಕರೇಗೌಡಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.