From the earlier FilmySphere, kept as published on 2014-10-09. It has not been updated.
Varalaxmi Interview
ವಿವರ ಹೇಳಿದ ವರಲಕ್ಷ್ಮೀ
Kannada
ಈ ವರಲಕ್ಷ್ಮೀ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ಮಾಣಿಕ್ಯದಲ್ಲಿ ಬಂದು ಸುದೀಪ್ ಗೆ ನಾಯಕಿಯಾದ ವರಲಕ್ಷ್ಮೀ ತಮಿಳಿನ ಖ್ಯಾತ ನಟ ಶರತ್ ಕುಮಾರ್ ಮಗಳು. ನಟಿಸಿದ ಮೊದಲ ಚಿತ್ರದಲ್ಲಿ ತಮಿಳಿನ ಖ್ಯಾತ ಯುವನಟ ಸಿಂಬು ಎಂಬ ಸಿಲಂಬರಸನ್ ನಾಯಕ. ಬಳಿಕ ವಿಶಾಲ್ ಜೊತೆಗೊಂದು ಚಿತ್ರ ನಟಿಸಿದ ಆನಂತರದಲ್ಲಿ ಕನ್ನಡಕ್ಕೆ ಬಂದಿದ್ದಳು. ಹಾಗೆ ನೋಡಿದರೆ ವರಲಕ್ಷ್ಮೀ ಮೂಲತಃ ಕನ್ನಡಿಗಳೇ. ಯಾಕೆಂದರೆ ಈಕೆ ಹುಟ್ಟಿದ್ದು ನಮ್ಮ ಬೆಂಗಳೂರಿನಲ್ಲೇ! ವರಲಕ್ಷ್ಮೀ ಜೊತೆಗೆ ನಡೆಸಿದ ಸರಳ ವಿರಳ ಮಾತುಕತೆ ಇದು.
ನಿಮ್ಮ ತಾಯಿ ಈಗಲೂ ಬೆಂಗಳೂರಿನಲ್ಲೇ ವಾಸವಾಗಿದ್ದಾರ?
ಇಲ್ಲ. ಅವರು ನನ್ನ ಜನನದ ವೇಳೆಯಷ್ಟೇ ಬೆಂಗಳೂರಲ್ಲಿದ್ದರು. ನಾನು ಕಲಿತು ಬೆಳೆದಿದ್ದು ಚೆನ್ನೈನಲ್ಲಿ. ಒಂದಷ್ಟು ಮಂದಿ ಸಂಬಂಧಿಕರು ಮಾತ್ರ ಈಗಲೂ ಬೆಂಗಳೂರಿನಲ್ಲಿದ್ದಾರೆ.
ಮಾಣಿಕ್ಯದ ಬಳಿಕ ಕನ್ನಡಕ್ಕೆ ಬರುವ ಸುದ್ದಿಯಿಲ್ಲ?
ಕನ್ನಡವೆಂದಷ್ಟೇ ಅಲ್ಲ. ಯಾವುದೇ ಭಾಷೆಯ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಕತೆ ಕೇಳುತ್ತಿದ್ದೇನಷ್ಟೇ.
ಚಿತ್ರಗಳ ಆಯ್ಕೆ ತಂದೆಯ ಮೂಲಕ ನಡೆಯತ್ತದೆಯೇ?
ಇಲ್ಲ. ನನ್ನ ಚಿತ್ರಗಳ ಆಯ್ಕೆ ನನ್ನದೇ ನಿರ್ಧಾರ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ನಟಿಸಲು ಅವಕಾಶ ಮತ್ತು ಪ್ರಾಧಾನ್ಯತೆ ಇರಬೇಕು. ಏನಾದರೂ ಗೈಡೆನ್ಸ್ ಬೇಕೆನಿಸಿದಾಗ ಮಾತ್ರ ಅಪ್ಪನಲ್ಲಿ ಕೇಳುತ್ತೇನೆ.
ಸುದೀಪ್ ಜೊತೆಗೆ ನಟಿಸಿದ ಅನುಭವ ಹೇಗಿತ್ತು?
ಚೆನ್ನಾಗಿತ್ತು. ಸಿಸಿಎಲ್ ನಲ್ಲಿ ಅವರನ್ನು ಕಂಡು ತುಂಬ ಹೆಚ್ಚು ಕೋಪಗೊಳ್ಳುವ ವ್ಯಕ್ತಿಯೆಂದುಕೊಂಡಿದ್ದೆ. ಆದರೆ ಮಾಣಿಕ್ಯದಲ್ಲಿನ ಅನುಭವ ಅದು ಸುಳ್ಳು ಎಂಬುದನ್ನು ಸಾಬೀತು ಮಾಡಿತು.
ನಿಮ್ಮ ಡ್ರೀಮ್ ರೋಲ್ ಯಾವುದು?
ಡ್ರೀಮ್ ರೋಲ್ ಬಗ್ಗೆ ನಾನಿನ್ನೂ ಕನಸು ಕಂಡಿಲ್ಲ. ಕನಸು ಕಂಡ ಮೇಲೆ ಹೇಳುತ್ತೇನೆ!
ನಿಮ್ಮ ಹವ್ಯಾಸಗಳೇನು?
ಡ್ಯಾನ್ಸಿಂಗ್ ಮತ್ತು ಟ್ರ್ಯಾವೆಲಿಂಗ್. ಕ್ಲಾಸಿಕಲ್ ಮತ್ತು ವೆಸ್ಟರ್ನ್ ಡ್ಯಾನ್ಸ್ ನಲ್ಲಿ ಹಿಡಿತವಿದೆ.
ನಿಮ್ಮ ಫೇವರಿಟ್ ಗಳ ಬಗ್ಗೆ ಹೇಳಿ
ನಾನು ನಾನ್ ವೆಜ್ ಪ್ರಿಯೆ. ಫೇವರಿಟ್ ಆ್ಯಕ್ಟರ್ ಶಾರುಖ್. ನಟಿ ಕಾಜೋಲ್.ಗ್ಲ್ಯಾಡಿಯೇಟರ್ ಇಷ್ಟದ ಚಿತ್ರ. ಎಸ್ಪಿಬಿ ನನ್ನ ಮೆಚ್ಚಿನ ಗಾಯಕರು.